A, a

(ಬಹುವಚನ As, A’s, Aes).

  1. ಇಂಗ್ಲಿಷ್‍ ವರ್ಣಮಾಲೆಯ ಅಕ್ಷರ.
  2. (ಸಂಗೀತ)ದ-ಧೈವತ; ಪಾಶ್ಚಾತ್ಯ ಸಂಗೀತದ ಸ್ವರಸಪ್ತಕದಲ್ಲಿ ಆರನೆಯ ಸ್ವರ.
  3. ಮೊದಲನೆಯ ಕಲ್ಪಿತ ವ್ಯಕ್ತಿ ಯಾ ಉದಾಹರಣೆ.
  4. (ರಸ್ತೆ, ಪರೀಕ್ಷೆಯ ಅಂಕಗಳು, ಐಶ್ವರ್ಯ, ಮೊದಲಾದವುಗಳ ದೃಷ್ಟಿಯಿಂದ ಜನ ಮೊದಲಾದವುಗಳ ವಿಷಯದಲ್ಲಿ) ಮೊದಲ ದರ್ಜೆ; ಪ್ರಥಮ ದರ್ಜೆ.
  5. (ಬೀಜಗಣಿತ, ಸಾಮಾನ್ಯವಾಗಿ a) ಗೊತ್ತಾದ ಪರಿಮಾಣವನ್ನು ಸೂಚಿಸುವ ಸಂಕೇತ.
ಪದಗುಚ್ಛ
  1. A1 (ಉಚ್ಚಾರಣೆ ಏವನ್‍)
    1. ಶ್ರೇಷ್ಠ ಹಡಗು; ಲಾಯ್ಡ್‍ ಸಂಸ್ಥೆಯ ದಾಖಲೆಯಲ್ಲಿ ಪರಮ ಶ್ರೇಷ್ಠವೆಂದು ಎಣಿಸಿರುವ ಹಡಗು.
    2. (ಆಡುಮಾತು) ಮೊದಲ ದರ್ಜೆಯದು; ಅತ್ಯುತ್ತಮ; ಪ್ರಪ್ರಥಮ; ಸರ್ವಶ್ರೇಷ್ಠ.
  2. A1, A2, ಮೊದಲಾದ ನಿರ್ದಿಷ್ಟ ಮುದ್ರಣ ಕಾಗದದ ಅಳತೆ: ${\rm A}4=297\times 210$ ಮಿಲಿಮೀಟರ್‍. ${\rm A}5=210\times 148$ ಮಿಲಿಮೀಟರ್‍.
ನುಡಿಗಟ್ಟು
  1. from A to B ಯಾವುದೇ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ: use one’s car simply as a means of getting from A to B ಯಾವುದೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಕೇವಲ ಒಂದು ಸಾಧನವನ್ನಾಗಿ ಕಾರನ್ನು ಬಳಸು.
  2. from A to Z ಸಂಪೂರ್ಣವಾಗಿ; ಆದ್ಯಂತ.